ಅಟಲ್ ಟಿಂಕರಿಂಗ್ ಫೆಸ್ಟ್ 2025 - ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳಿಗೆ ಹಲವು ಬಹುಮಾನ.
ಶ್ರೀರಾಮ ವಿದ್ಯಾ ಕೇಂದ್ರ ಹನುಮಾನ್ ನಗರ ಕಲ್ಲಡ್ಕ ಇಲ್ಲಿ ನಡೆದಂತಹ ಅಟಲ್ ಟಿಂಕರಿಂಗ್ ಫೆಸ್ಟ್ 2025 ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಇದರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ. 10ನೇ ತರಗತಿಯ ನಿರೀಕ್ಷಿತ್ ಹೆಗ್ಡೆ (ಶ್ರೀ ನಿಶ್ಚಯ್ ಕುಮಾರ್ ಹೆಗ್ಡೆ ಮತ್ತು ಶ್ರೀಮತಿ ನಾಗರತ್ನ ದಂಪತಿ ಪುತ್ರ) ‘ಲಾಜಿಕ್ ಅಂಡ್ ಮ್ಯಾತ್ ಪಝಲ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 9ನೇ ತರಗತಿಯ ಪಿ ಕೆ ಶುಭನ್ (ಶ್ರೀ ಪದ್ಮನಾಭ ಕೆ ಮತ್ತು ಶ್ರೀಮತಿ ರೇಖಾ ಪಿ ನಾಯ್ಕ್ ದಂಪತಿ ಪುತ್ರ) ಹಾಗೂ ಚಂದನ್ (ಶ್ರೀ ಶಾಂತರಾಮ ನಾಯಕ್ ಮತ್ತು ಶ್ರೀಮತಿ ಕಾಂತಿಮಣಿ ದಂಪತಿ ಪುತ್ರ) ಅವರ ತಂಡ ಮತ್ತು ನಮೀಶ್ ( ಶ್ರೀ ಸತೀಶ್ ಪೂಜಾರಿ ಮತ್ತು ಶ್ರೀಮತಿ ಜಯಶ್ರೀ ದಂಪತಿ ಪುತ್ರ) ಹಾಗೂ ಪೂರ್ವಿ ಜೆ ಎ (ಶ್ರೀ ಜನಾರ್ಧನ ಎ ಮತ್ತು ಶ್ರೀಮತಿ ವೇದಾವತಿ ಎಸ್ ದಂಪತಿ ಪುತ್ರಿ ) ಅವರ ತಂಡ ‘ಎಲ್ ಇ ಡಿ ಆರ್ಟ್ ಅಂಡ್ ಗ್ಲೋ’ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ, 10ನೇ ತರಗತಿಯ ಅಕ್ಷರ್ ಕೆ (ಶ್ರೀ ಕೃಷ್ಣಯ್ಯ ಕೆ ಮತ್ತು ಶ್ರೀಮತಿ ಸೊನಾಲಿ ದಂಪತಿ ಪುತ್ರ) ಹಾಗೂ ಪೃಥ್ವಿರಾಜ್ (ಶ್ರೀ ಗಣೇಶ್ ಭಂಡಾರಿ ಮತ್ತು ಶ್ರೀಮತಿ ಲತಾ ದಂಪತಿ ಪುತ್ರ) ‘ಪೇಪರ್ ಪ್ಲೇನ್’ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ, 9ನೇ ತರಗತಿಯ ಕ್ಷಮೇತ್ ಜೈನ್ (ಶ್ರೀ ಹನೀಶ್ ಕುಮಾರ್ ಮತ್ತು ಶ್ರೀಮತಿ ಶ್ರುತಿ ಕುಮಾರಿ ದಂಪತಿ ಪುತ್ರ) ಹಾಗೂ ಪ್ರಣವ್ ಪ್ರಭು ( ಶ್ರೀ ಪದ್ಮನಾಭ ಪ್ರಭು ಹಾಗೂ ಶ್ರೀಮತಿ ವಿದ್ಯಾ ಕುಮಾರಿ ದಂಪತಿ ಪುತ್ರ)ಅವರ ತಂಡ ‘ಸೈನ್ಸ್ ವರ್ಕಿಂಗ್ ಮಾಡೆಲ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 9ನೇ ತರಗತಿಯ ವಿದ್ಯಾರ್ಥಿಗಳಾದ ಸಮೃದ್ಧ್ ಆರ್ ಶೆಟ್ಟಿ (ಶ್ರೀ ರಾಮಚಂದ್ರ ಕೆ ಮತ್ತು ಶ್ರೀಮತಿ ಶೋಭಾ ದಂಪತಿ ಪುತ್ರ) ಪ್ರೇಮ್ ಸಾಗರ್ (ಶ್ರೀ ಸುಧೀರ್ ಮತ್ತು ಶ್ರೀಮತಿ ವಿನಯ ಪೈ ದಂಪತಿ ಪುತ್ರ) ‘ಎ ಟಿ ಎಲ್ ಮೆಮೊರಿ ಟೆಸ್ಟ್’ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿ ನಗದು ಸಹಿತ ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ಗಳಿಸಿಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.