ಜಿಲ್ಲಾಮಟ್ಟದ ಶಾಂತಿವನ ಟ್ರಸ್ಟ್ ಸ್ಪರ್ಧೆಗಳು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ನಿಲಿಷ್ಕ. ಕೆ. ಚಿತ್ರ ಕಲೆಯಲ್ಲಿ ಪ್ರಥಮ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜ್ಞಾನರಥ/ ಜ್ಞಾನಪಥ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಆಧಾರಿತ ವಿವಿಧ ಸ್ಪರ್ಧೆಗಳು ಕೆ.ಪಿ.ಎಸ್.ಪುಂಜಾಲ್ಕಟ್ಟೆ ಯಲ್ಲಿ ದಿನಾಂಕ 18-11-2025 ರಂದು ನಡೆಯಿತು. ಪ್ರೌಢ ಶಾಲಾ ವಿಭಾಗದಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ನಿಲಿಷ್ಕ. ಕೆ ( ಶ್ರೀ ದಿನೇಶ್ ನಾಯ್ಕ ಕೆ ಜಿ ಹಾಗೂ ಶ್ರೀಮತಿ ಸ್ಮಿತಾ ಶ್ರೀ ಬಿ) ಚಿತ್ರಕಲೆಯಲ್ಲಿ ಪಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.