Cancel Preloader
  • Call: 08251 – 232015
  • Email: school.vem@gmail.com
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
  • 08251 – 232015
  • 09449 - 678333
  • Email: school.vem@gmail.com

News & Events

  • Home
  • News & Events

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾಯುಸೇನೆಗೆ ಆಯ್ಕೆಯಾದ ಹಿರಿಯ ವಿದ್ಯಾರ್ಥಿಗಳಿಬ್ಬರಿಗೆ ಸನ್ಮಾನ ಕಾರ್ಯಕ್ರಮ

Gallery Image

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 16-12-2025ನೇ ಮಂಗಳವಾರದಂದು ತಮ್ಮ ಶಾಲೆಯ ವಿದ್ಯಾರ್ಥಿ ಪ್ರತಿಭೆಗಳಿಗೆ ಸನ್ಮಾನ ಕಾರ್ಯಕ್ರಮ ವನ್ನು ನಡೆಸಲಾಯಿತು. ಶಾಲೆಯ ಹಿರಿಯ ವಿದ್ಯಾರ್ಥಿ ಶ್ರೀ ಆಶಿಶ್ ಶಂಕರ್ ರವರು ಶ್ರೀ ವೆಂಕಟಕೃಷ್ಣ ಮತ್ತು ಶ್ರೀಮತಿ ಸುಜಾತ ದಂಪತಿಗಳ ಪುತ್ರ, ಇವರು AF- CAT Exam ಬರೆದು ಭಾರತೀಯ ವಾಯುಪಡೆಗೆ ಆಯ್ಕೆಯಾಗಿದ್ದು, ಹೈದರಾಬಾದ್ ನಲ್ಲಿ ನಡೆಯುವ ತರಬೇತಿಗಾಗಿ ತೆರಳಲಿದ್ದಾರೆ. ಅಂತೆಯೇ ಇನ್ನೋರ್ವ ಹಿರಿಯ ವಿದ್ಯಾರ್ಥಿ ಶ್ರೀ ಕೀರ್ತನ್.ಕೆ ರವರು ಶ್ರೀ ಪದ್ಮಯ್ಯ ಗೌಡ ಮತ್ತು ಶ್ರೀಮತಿ ಪುಷ್ಪಲತಾ ದಂಪತಿಗಳ ಪುತ್ರನಾಗಿದ್ದು, Airman Y Service Exam ಬರೆದು ಭಾರತೀಯ ವಾಯುಸೇನೆಗೆ ಆಯ್ಕೆಯಾಗಿದ್ದು, 6ತಿಂಗಳ ತರಬೇತಿಯನ್ನು AT School ಬೆಳಗಾವಿಯಲ್ಲಿ ಪಡೆಯಲಿದ್ದಾರೆ.
ಶ್ರೀ ಆಶಿಶ್ ಶಂಕರ್ ರವರು ತಾವು ಗಳಿಸಿದ ವೃತ್ತಿಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿ, AF- CAT Exam ನ ತಯಾರಿಗಾಗಿ ತಮ್ಮನ್ನು ಸಂಪೂರ್ಣವಾಗಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿರುವುದಾಗಿ ಆ ಮೂಲಕ ಆಯ್ಕೆಯಾಗಲು ಸಾಧ್ಯವಾಯಿತು ಎಂದು ತಮ್ಮ ಅನುಭವಗಳನ್ನು ಶಿಕ್ಷಕ ವೃಂದದವರೊಂದಿಗೆ ಹಂಚಿಕೊಂಡರು. ಅಂತಯೇ ಶ್ರೀ ಕೀರ್ತನ್.ಕೆ ರವರು ಕೂಡ ಡಿಪ್ಲೋಮ ವಿದ್ಯಾಭ್ಯಾಸದ ಜೊತೆಗೆ Airman Y Service Exam ಗೆ ನಡೆಸಿದ ತಯಾರಿಯನ್ನು ತಿಳಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಮುಖ್ಯೋಪಾಧ್ಯಾಯರು ಹಾಗೂ ಸನ್ಮಾನಿಸಲ್ಪಟ್ಟ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದು, ಹಿತನುಡಿಗಳನ್ನಾಡಿದರು. ಶಾಲಾ ಸಂಚಾಲಕರಾದ ಶ್ರೀ ರವಿನಾರಾಯಣ.ಎಂ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಶಾಲಾ ಬಸ್ ಸಾರಥಿಗಳು ಸಾಧಕ ಪ್ರತಿಭೆಗಳನ್ನು ಹೂಗುಚ್ಛ ನೀಡಿ ಅಭಿನಂದಿಸಿದರು. ಶಾಲಾ ಅಧ್ಯಕ್ಷರಾದ ಡಾ. ಶಿವಪ್ರಕಾಶ್.ಎಂ. ರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಶಾಲೆಯ ಸಮಸ್ತರ ಪರವಾಗಿ ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಯಶಸ್ಸನ್ನು ಕೋರಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿ ಸಾಧಕರಿಂದ ಬಹುಮಾನ ವಿತರಿಸಲಾಯಿತು.
ಹಿರಿಯ ಶಿಕ್ಷಕಿ ಶ್ರೀಮತಿ ಪುಷ್ಪಲತಾ. ಬಿ.ಕೆ ವೈಯಕ್ತಿಕ ಗೀತೆಯನ್ನು ಹಾಡಿದರು. ಶಾಲಾ ಶಿಕ್ಷಕಿ ಶ್ರೀಮತಿ ಶಾಂತಿ ಸ್ವಾಗತಿಸಿ, ಹಿರಿಯ ಶಿಕ್ಷಕ ಶ್ರೀ ರಾಧಾಕೃಷ್ಣ ರೈ ವಂದಿಸಿ, ಶಿಕ್ಷಕಿ ಶ್ರೀಮತಿ ಯಶೋಧ ಕಾರ್ಯಕ್ರಮ ನಿರೂಪಿಸಿದರು.

Vivekananda English Medium School

VIVEKANANDA ENGLISH MEDIUM SCHOOL
A unit of Vivekananda Vidhyavardhaka Sangha(R.)
VIVEKANAGARA, TENKILA, PUTTUR –574201

Links

  • Home
  • About Us
  • Management
  • Contact Us

Links

  • Facilities
  • & News Events
  • Gallery
  • Alumni

Contacts

  • Call:08251 – 232015
  • Call:09449 - 678333
  • Email:school.vem@gmail.com

Copyright 2022 Vivekananda English Medium School Designed By Websoft - Mangalore. All Rights Reserved