ರಾಜ್ಯಮಟ್ಟದ ILAP ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ
ಸೇವಾ ಇನ್ ಆಕ್ಷನ್ ಹಾಗೂ ಕ್ವಿಜೇಬಲ್ಡ್ ಫೌಂಡೇಶನ್ ವತಿಯಿಂದ ಆಯೋಜಿಸಿದಂತಹ ಸೃಜನಾತ್ಮಕ ಕಲಿಕಾ ಚಟುವಟಿಕೆಗಳು ಹಾಗೂ ಮಾದರಿ ತಯಾರಿ - INNOVATIVE LEARNING ACTIVITIES & PPROJECTS CONTEST ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ರಾಜ್ಯಮಟ್ಟದ ಸ್ಪರ್ಧೆಗಳು ಬಿ ಎಂ ಎಸ್ ಇಂಜಿನಿಯರಿಂಗ್ ಕಾಲೇಜ್ ಬಸವನಗುಡಿ ಬೆಂಗಳೂರು ಇಲ್ಲಿ ದಿನಾಂಕ 7ನೇ ಫೆಬ್ರವರಿ 2026, ಶನಿವಾರದಂದು ನಡೆದಿರುತ್ತದೆ. ಸದ್ರಿ ILAP ಸ್ಪರ್ಧೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಾದ ಅನ್ವೇಷ್ ಕೆ ಎಚ್ ಶ್ರೀ ಕೆ ಜಿ ಹರೀಶ್ ಕುಮಾರ್ ಮತ್ತು ಜಯಮಾಲಾ ಪಿ ಎನ್ ದಂಪತಿ ಪುತ್ರ ಹಾಗೂ ಮಯೂರಿ ಕೆ ( ಶ್ರೀ ಉದಯರವಿ ಕೆ ಮತ್ತು ಶ್ರೀಮತಿ ಶ್ವೇತಾ ಕೆ ದಂಪತಿ
ಪುತ್ರಿ) ಇವರ ತಂಡ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಪ್ರಥಮ ಸ್ಥಾನವು ಪ್ರಶಸ್ತಿ ಫಲಕ ಪ್ರಮಾಣ ಪತ್ರ ಹಾಗೂ ₹10,000 ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ಸದ್ರಿ ವಿದ್ಯಾರ್ಥಿಗಳ ಮಾದರಿಯೂ ನಿರ್ಣಾಯಕರ ಹಾಗೂ ಸಂದರ್ಶಕರ ವಿಶೇಷ ಮನ್ನಣೆಗೆ ಪಾತ್ರವಾಗಿತ್ತು ಎಂದು ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸುತ್ತಾರೆ.