ISRO YUVIKA - 2026 ಶಿಬಿರ: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ
ಪಿ ಕೆ ಶುಭನ್ ಆಯ್ಕೆ
ಪ್ರೌಢಶಾಲಾ ವಿಭಾಗದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ಪರಿಚಯಿಸುವ ಸಲುವಾಗಿ ನಮ್ಮ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಆಯೋಜಿಸಿರುವಂತಹ ‘ಯುವಿಕ - 2026 (ಯುವ ವಿಜ್ಞಾನಿ ಕಾರ್ಯಕ್ರಮ)’ ಶಿಬಿರಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಪಿ ಕೆ ಶುಭನ್ (ಶ್ರೀ ಪದ್ಮನಾಭ ಕೆ ಮತ್ತು ಶ್ರೀಮತಿ ರೇಖಾ ಪಿ ನಾಯ್ಕ್ ದಂಪತಿ ಪುತ್ರ) ಆಯ್ಕೆಯಾಗಿರುತ್ತಾನೆ.
11 ಮೇ 2026 ರಿಂದ 22 ಮೇ 2026 ರ ವರೆಗೆ ಎರಡು ವಾರಗಳ ಕಾಲ ನಡೆಯುವ ಯುವಿಕ 2026 ಶಿಬಿರವು ಇಸ್ರೋ ಕೇಂದ್ರದಲ್ಲಿ ನಡೆಯಲಿದೆ. ಕೇಂದ್ರ ಸರಕಾರದಿಂದ ಪ್ರಾಯೋಜಿತವಾಗಿರುವ ಈ ಶಿಬಿರವು ಸನಿವಾಸ ಶಿಬಿರವಾಗಿದ್ದು , ಆಯ್ಕೆಯಾದ ಅಭ್ಯರ್ಥಿಗಳ ಸಂಪೂರ್ಣ ಖರ್ಚು ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸಲಿರುವುದು. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ಬಗ್ಗೆ ಆಸಕ್ತಿ ಮತ್ತು ಕುತೂಹಲವನ್ನು ಹೆಚ್ಚಿಸಲು ತಜ್ಞ ವಿಜ್ಞಾನಿಗಳೊಂದಿಗೆ ಸಂವಾದ, ಇಸ್ರೋ ಪ್ರಯೋಗಾಲಯದ ಭೇಟಿ, ರಾಕೆಟ್ ತಯಾರಿಕೆ ಮುಂತಾದ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ.
NCC, ಕ್ರೀಡೆ ವಿಜ್ಞಾನ ಮಾದರಿ ತಯಾರಿ ರಸಪ್ರಶ್ನೆ ಕಲಿಕೆ ಮುಂತಾದ ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿಶೇಷ ಸಾಧನೆಯನ್ನು ಮಾಡಿರುವ ಪಿ ಕೆ ಶುಭನ್ ಆಯ್ಕೆಯ ವಿವಿಧ ಹಂತಗಳ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರೈಸಿ, YUVIKA-2026 ಶಿಬಿರಕ್ಕೆ ಆಯ್ಕೆಯಾಗಿರುತ್ತಾನೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.