ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ
"ಹುಟ್ಟಿದ ಪ್ರತಿ ಮಗುವನ್ನು ವೀರ ಯೋಧ ನನ್ನಾಗಿ ಮಾಡುವುದೇ ನಮ್ಮ ಧ್ಯೇಯ ವಾಗಬೇಕು. ಕಾರ್ಗಿಲ್ ದಿನ ಅಂದರೆ ಹುತಾತ್ಮ ಯೋಧರಿಗೆ ನಾವು ಮಾಡುವ ನಮನ ವಾಗಿದೆ" ಎಂದು ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಗುರುಗಳಾದ ಶ್ರೀ ರಾಜೇಶ್ ನೆಲ್ಲಿತ್ತಡ್ಕ ಇವರು ದಿನಾಂಕ 26-07-2025ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಯಾದವಶ್ರೀ ಸಭಾಂಗಣ ದಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ್ಯ ಕಾರ್ಯಕ್ರಮ ದಲ್ಲಿ ನುಡಿದರು.
ನಮ್ಮ ವೀರ ಯೋಧ ರಾದ ಸೌರಭ್ ಖಾಲಿಯಾ, ಯೋಗೇಂದ್ರ ಸಿಂಗ್, ವಿಕ್ರಂ ಭಾತ್ರ ಮೊದಲಾದ ವರ ವೀರ ಹೋರಾಟ ದಿಂದ ನಾವು ಕಾರ್ಗಿಲ್ ನ್ನು ಮರಳಿ ಪಡೆದಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮ ದಲ್ಲಿ ಅಧ್ಯಕ್ಷತೆ ವಹಿಸಿ ಮಾತಾಡಿ ವಿದ್ಯಾರ್ಥಿಗಳು ದೇಶ ಭಕ್ತಿ ಯನ್ನು ಮೈಗೂಡಿಸಿ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕು, ಭ್ರಷ್ಟಾಚಾರ ಮುಕ್ತ ಭಾರತ ವನ್ನು ಮಾಡುವುದೇ ನಮ್ಮ ಗುರಿ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮ ದಲ್ಲಿ ಶಾಲಾ ಮುಖ್ಯ ಗುರುಗಳಾದ ಶ್ರೀ ಸತೀಶ್ ಕುಮಾರ್ ರೈ, ಶ್ರೀಮತಿ ಸಂಧ್ಯಾ, ಶ್ರೀಮತಿ ಮಮತಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ದೇಶ ಭಕ್ತಿಗೀತೆ ಹಾಡಿದರು. ಕುಮಾರಿ ಕ್ಷಮಾ ಜೆ ರೈ ಸ್ವಾಗತಿಸಿ, ಕಾರ್ಯಕ್ರಮ ವನ್ನು ವಿದ್ಯಾರ್ಥಿಗಳಾದ ಕುಮಾರಿ ವೈಷ್ಣಿ ಹಾಗೂ ಅತಿತ್ ರೈ ನಿರೂಪಿಸಿದರು. ಶಿಕ್ಷಕರು ಸಹಕರಿಸಿದರು.