ಕರ್ನಾಟಕ ರಾಜ್ಯ ಕ್ರಿಕೆಟ್ ಎಸೋಸಿಯೇಷನ್ ಮಂಗಳೂರು ವಿಭಾಗದ ತಂಡಕ್ಕೆ ವಿವೇಕಾನಂದದ ಮನ್ವಿತ್. ಡಿ ಆಯ್ಕೆ .
ಕರ್ನಾಟಕ ರಾಜ್ಯ ಕ್ರಿಕೆಟ್ ಎಸೋಸಿಯೇಷನ್ ನ ಮಂಗಳೂರು ವಿಭಾಗದ 14ರ ವಯೋಮಾನದ ತಂಡಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಮನ್ವಿತ್ .ಡಿ (ಕುಳ ದಾಮೋದರ ಗೌಡ ಮತ್ತು ಉಷಾ ದಂಪತಿಗಳ ಪುತ್ರ) ಆಯ್ಕೆಯಾಗಿರುತ್ತಾನೆ. ಮಂಗಳೂರು ವಿಭಾಗವು ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳನ್ನು ಒಳಗೊಂಡಿರುತ್ತದೆ. ಪುತ್ತೂರಿನಿಂದ ಆಯ್ಕೆಯಾಗಿರುವ ಏಕೈಕ ವಿದ್ಯಾರ್ಥಿಯಾಗಿರುತ್ತಾನೆ .K.S.C.A. ಇಂಟರ್ ಜೋನ್ ಪಂದ್ಯಕೂಟವು ಜನವರಿ 3, 2026 ರಿಂದ ಜನವರಿ 15, 2026 ರ ತನಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕೂಟವು ಕರ್ನಾಟಕ ರಾಜ್ಯದ 14ರ ವಯೋಮಾನದ ತಂಡವನ್ನು ರಚಿಸುವ ಸಲುವಾಗಿ ನಡೆಯುತ್ತಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.