ಪ್ರತಿಭಾ ಕಾರಂಜಿ 2025:ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಪ್ರಶಸ್ತಿ
ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇದರ ವ್ಯಾಪ್ತಿಗೊಳಪಟ್ಟ ಪುತ್ತೂರು ಮತ್ತು ಕಡಬ ತಾಲೂಕುಗಳ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಲನ-2025 ವು ಹಾರಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಡಿಸೆಂಬರ್ 13ರಂದು ನಡೆಯಿತು. ಭರತನಾಟ್ಯ ಸ್ಪರ್ಧೆಯಲ್ಲಿ 10ನೇ ತರಗತಿಯ ಕೀರ್ತನಾ ವರ್ಮ (ಪ್ರತಾಪಸಿಂಹ ವರ್ಮ ಮತ್ತು ವೀಣಾ ಕುಮಾರಿ ದಂಪತಿಗಳ ಪುತ್ರಿ), ಗಝಲ್ ಸ್ಪರ್ಧೆಯಲ್ಲಿ ಸುಪ್ರಜಾ ರಾವ್ (ಪ್ರಶಾಂತ್ ರಾವ್ ಮತ್ತು ಸುಮನ ದಂಪತಿಗಳ ಪುತ್ರಿ), ಚಿತ್ರಕಲೆಯಲ್ಲಿ ನಿಲಿಷ್ಕಾ(ದಿನೇಶ್ ನಾಯ್ಕ ಮತ್ತು ಸ್ಮಿತಾಶ್ರೀ ದಂಪತಿಗಳ ಪುತ್ರಿ)ಇವರುಗಳು ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತಾರೆ. ಜಿಲ್ಲಾ ಮಟ್ಟದ ಸ್ಪರ್ಧೆಗಳು ಡಿಸೆಂಬರ್ 22ರಂದು ಸೈಂಟ್ ಥೋಮಸ್ ಪ್ರೌಢ ಶಾಲೆ , ಅಲಂಗಾರು, ಮೂಡಬಿದಿರೆ ಇಲ್ಲಿ ನಡೆಯಲಿರುವುದು.