ಸ್ವಚ್ಛ ಜೀವಜಲದ ಸಂರಕ್ಷಣೆ ನಮ್ಮ ಜವಾಬ್ದಾರಿ - ಡಾ.ಪ್ರಭಾಕರ ಭಟ್ ಕಲ್ಲಡ್ಕ.
ಪಂಚಭೂತಗಳಲ್ಲಿ ಒಂದಾಗಿರುವ ಶುದ್ಧ ಜೀವ ಜಲವನ್ನು ಜಾಗರೂಕತೆಯಿಂದ ಬಳಸುವುದು ಇಂದಿನ ಅವಶ್ಯಕತೆ. ಪರಿಸರದಲ್ಲಿ ಲಭ್ಯವಿರುವ ನೀರನ್ನು ಬಳಸುವಾಗ ಮುಂದಿನ ಪೀಳಿಗೆಯನ್ನು ಗಮನದಲ್ಲಿ ಇರಿಸಬೇಕಾದ್ದು ಇಂದಿನ ಅವಶ್ಯಕತೆಯಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಅವರು ದಿನಾಂಕ 12-11-2025ರಂದು ತೆಂಕಿಲ ವಿದ್ಯಾಸಂಸ್ಥೆಗಳ ವಠಾರದ ನವೀಕೃತಗೊಂಡ ಬಾವಿಯ ಬಳಿ ಹಮ್ಮಿಕೊಳ್ಳಲಾದ "ಗಂಗಾ ಪೂಜೆ ಹಾಗೂ ತೀರ್ಥಧಾರಾ" ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿಯಂಗವಾಗಿ ಹಮ್ಮಿಕೊಂಡಿರುವ "ಭವಿಷ್ಯದ ಕನಸಿಗೆ ಹಸಿರಿನ ಹೆಜ್ಜೆ" ಧ್ಯೇಯದ ಜಲಸಿರಿ ಸಂರಕ್ಷಣಾ ಕಾರ್ಯದಲ್ಲಿ ನಾವೆಲ್ಲರೂ ಒಮ್ಮನಸ್ಸಿನಿಂದ ತೊಡಗಿಸಿಕೊಳ್ಳಬೇಕು.
ಪರಿಸರದ ನೈರ್ಮಲ್ಯದ ಜೊತೆಗೆ ಭವಿಷ್ಯದ ಕುರುತು ಯೋಚಿಸಿ, ಮುಂದಡಿಯಿಡುವುದು ಅಗತ್ಯವಾಗಿದೆ ಎಂದು ಅವರು ನುಡಿದರು. ಗಂಗಾ ಪೂಜೆ ಸಲುವಾಗಿ ಪುತ್ತೂರು ತಾಲೂಕಿನ ವಿವಿಧ ದೇವಾಲಯಗಳು, ದೈವ ಸಾನ್ನಿಧ್ಯಗಳಿಂದ ಪೋಷಕರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಸಂಗ್ರಹಿಸಿ ತಂದ ಪುಣ್ಯ ತೀರ್ಥಗಳನ್ನು ಮೆರವಣಿಗೆ ಮೂಲಕ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ವಿವೇಕಾನಂದ ಶಿಕ್ಷಣ ಮಹಾ ವಿದ್ಯಾಲಯ, ನರೇಂದ್ರ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಪದಾಧಿಕಾರಿಗಳು, ಪೋಷಕರು, ಶಿಕ್ಷಕ - ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.