ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಎಸ್.ಎಸ್.ಎಲ್.ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ-ಅಭಿನಂದನೆ
ದಿನಾಂಕ 31/05/22 ನೇ ಮಂಗಳವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಯಾದವ ಶ್ರೀ ಸಭಾಂಗಣ ದಲ್ಲಿ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ 625ರಲ್ಲಿ 625 ಅಂಕ ಪಡೆದ ವಿದ್ಯಾರ್ಥಿಗಳಾದ ಆತ್ಮೀಯ ಕಶ್ಯಪ್, ಅಭಯ್ ಶರ್ಮ, ಅಭಿಜ್ಞ.ಆರ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು ಹಾಗೂ ಆಡಳಿತ ಮಂಡಳಯ ಮಾತಿನಂತೆ ಲ್ಯಾಪ್ ಟಾಪ್ ನೀಡಿ ಸನ್ಮಾನಿಸಿ ದರು. ಹಾಗೂ ಆ ಬ್ಯಾಚ್ ನ ಎಲ್ಲಾ 232 ಮಂದಿ ವಿದ್ಯರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕರಾದ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಪ್ರಶಾಂತ್ ಭಟ್ ಸಾಧಕರ ಹೆಸರನ್ನು ಓದಿದರು.
ಕಾರ್ಯಕ್ರಮದ ಮುಖ್ಯಅತಿಥಿಗಳಾದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಹಿರಿಯ ಸದಸ್ಯರಾದ ಶ್ರೀನಿವಾಸ ಪೈ ರವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಾಧನೆ ಎಲ್ಲರನ್ನು ತಿರುಗಿ ನೋಡುವಂತೆ ಮಾಡಿದೆ. ಶಿಕ್ಷಕರ ಶ್ರಮ ನಿಜಕ್ಕೂ ಶ್ಲಾಘನೀಯ, ನೆರೆದಿರುವ ಪೋಷಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಕಳುಹಿದಕ್ಕೆ ಕೃತಜ್ಞತೆ ಗಳನ್ನು ಸಲ್ಲಿಸುತ್ತೇನೆ. ಸಂಸ್ಥೆಯ ಸ್ಥಾಪನೆಯ ಪ್ರೇರಕ ಶಕ್ತಿಯಾಗಿದ್ದ ದಿ| ರಾಮ ಭಟ್ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಪ್ರಥಮ ಅಧ್ಯಕ್ಷರಾಗಿದ್ದ ದಿ| ಶ್ರೀ ನಾರಾಯಣ ರೈ ಅವರ ಸೇವೆಯ ಸ್ಮರಣೆ ಮಾಡಿದರು.
ಸಾಧನೆ ತೋರಿದ ವಿದ್ಯಾರ್ಥಿಗಳ ಪೋಷಕರಾದ ಡಾಕ್ಟರ್ ರಾಜೇಶ್ ರವರು ಮಾತನಾಡಿ , ಮಕ್ಕಳ ಸಾಧನೆ ಯನ್ನು ಗುರುತಿದ್ದಕ್ಕೆ ಶಾಲೆಗೆ ಹಾಗೂ ಮಾರ್ಗದರ್ಶನ ಮಾಡಿದ ಶಿಕ್ಷಕ ವೃಂದಕ್ಕೆ ಧನ್ಯವಾದಗಳು, ಈ ಸಾಧನೆ ಮುಂದಿನ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಎಂದು ನುಡಿದರು.