ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ ಸಪ್ತಶಕ್ತಿ’ ಸಂಗಮ
“ಸಪ್ತಶಕ್ತಿ ಸಂಗಮ” ದ ಪರಿಕಲ್ಪನೆ ಮಾತೆಯರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ. ಸಪ್ತ ಸದ್ಗುಣಗಳನ್ನು ಮೈಗೂಡಿಸಿಕೊಂಡ ಮಹಿಳೆ ಸಮಾಜದಲ್ಲಿ ಪ್ರೇರಕ ಶಕ್ತಿಯಾಗಿ ಬೆಳೆಯುತ್ತಾಳೆ. ಪರಿಸರ ಪ್ರೀತಿ, ಆಹಾರ ಪದ್ಧತಿ ಭಜನೆಯ ಮಹತ್ವವನ್ನು ನಮ್ಮ ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗಬೇಕು ಎಂದು ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಾಧ್ಯಾಪಕರಾದ ರಾಜೀವಿಯವರು ಹೇಳಿದರು.
ಅವರು ಡಿಸೆಂಬರ್ 23 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಐದು ಮತ್ತು ಆರನೇ ತರಗತಿಯ ವಿದ್ಯಾರ್ಥಿಗಳ ಮಾತೆಯರಿಗೆ ನಡೆದ “ಸಪ್ತಶಕ್ತಿ ಸಂಗಮ “ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವನ್ನು ಅಲಂಕರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಹಿರಿಯ ಶಿಕ್ಷಕಿ ಆಶಾ.ಕೆ ಮಾತನಾಡಿ, ಪೋಷಕರ ಜೀವನ ಶೈಲಿಯು ಇಂದಿನ ಪ್ರಸ್ತುತ ಯುಗದಲ್ಲಿ ಬದಲಾಗಬೇಕು, ಮಕ್ಕಳಿಗೆ ಸಂಸ್ಕಾರಯುತ ಜೀವನ ,ಭಾರತೀಯ ಸಂಸ್ಕೃತಿಯ ಆಚಾರ ವಿಚಾರಗಳನ್ನು ತಿಳಿಸಿ ಕೊಡಬೇಕೆಂದು ಹೇಳಿದರು.
ಶಾಲಾ ಶಿಕ್ಷಕಿ ಸೌಮ್ಯ ಕುಮಾರಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಮಾರಿ ಯಶಸ್ವಿನಿ ವೈಯಕ್ತಿಕ ಗೀತೆಯನ್ನು ಹಾಡಿದರು. ಪುತ್ತೂರಿನ ಪ್ರಸಿದ್ಧ ಹೈನುಗಾರಿಕಾ ಸಾಧಕಿ ಪ್ರೇಮಲತಾ ಎಂ.ಬಂಗೇರ ಅವರನ್ನು ಸನ್ಮಾನಿಸಲಾಯಿತು. ಪವಿತ್ರ ರೈ ಸನ್ಮಾನಿತರ ಪರಿಚಯ ವಾಚಿಸಿದರು. ಭವ್ಯ ನಾವಳೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಲತಾ ಎಂ. ಮಾತೆಯರಿಗೆ ಕಾರ್ಯಕ್ರಮದ ಕುರಿತು ಸಂಕಲ್ಪ ಮಾಡಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಸಂಧ್ಯಾ ಕೆ ಹಾಗೂ ಕೆ. ಜಿ ವಿಭಾಗದ ಮುಖ್ಯಸ್ಥೆ ಮಮತಾ. ಬಿ.ಉಪಸ್ಥಿತರಿದ್ದರು. ಜ್ಯೋತಿಲಕ್ಷ್ಮಿ ಪ್ರಾರ್ಥಿಸಿ, ಮಲ್ಲಿಕಾ ಸ್ವಾಗತಿಸಿದರು. ಸವಿತಾ ಕೆ ಕಾರ್ಯಕ್ರಮ ನಿರೂಪಿಸಿದರು. ಆಶಾಲತಾ ಪಿ. ಹೆಚ್ . ವಂದಿಸಿದರು.