ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಸಪ್ತಶಕ್ತಿ ಸಂಗಮ’
ಪುತ್ತೂರು: ದಿನಾಂಕ 20-12-2025ನೇ ಶನಿವಾರ ಅಪರಾಹ್ನ 2 ಗಂಟೆಗೆ ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಣ ಸಂಸ್ಥಾನದ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿ ಒಂದು ಮತ್ತು ಎರಡನೇ ತರಗತಿಯ ಮಕ್ಕಳ ಮಾತೆಯರಿಗೆ “ಸಪ್ತಶಕ್ತಿ ಸಂಗಮ” ಎಂಬ ಅವಿಸ್ಮರಣೀಯ ಕಾರ್ಯಕ್ರಮವು ನಡೆಯಿತು.
ಮುಖ್ಯ ಅತಿಥಿಯಾಗಿ ವೇದಿಕೆಯನ್ನು ಅಲಂಕರಿಸಿದ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಆಶಾ. ಕೆ. ಇವರು ಮಾತನಾಡಿ ಮಹಿಳೆ ಒಂದು ಪ್ರೇರಕ ಶಕ್ತಿ, ರಾಷ್ಟ್ರ ನಿರ್ಮಾಣದಲ್ಲಿ ಅವಳ ಪಾತ್ರ ಮಹತ್ವದ್ದಾಗಿದ್ದು, ಅವಳು ಸಪ್ತ ಸದ್ಗುಣಗಳನ್ನು ಅಳವಡಿಸಿಕೊಂಡು ಭವ್ಯ ಭಾರತ ನಿರ್ಮಾಣ ಮಾಡುವಲ್ಲಿ ನಾರೀಶಕ್ತಿ ಸ್ಪೂರ್ತಿದಾಯಕವಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ಮಾಲಾ ಮಹೇಶ್ ಅವರು ಮಾತನಾಡಿ ಹೆಣ್ಣು-ಗಂಡು ಮಕ್ಕಳು ಎಂಬ ಭೇದ ಭಾವವಿಲ್ಲದೆ ಮನೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ನಾವು-ನಮ್ಮವರು ಎಂಬ ಭಾವನೆಯಿಂದ ಜೀವನ ನಡೆಸಬೇಕು ಎಂದರು.
ಶಾಲಾ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ವಾಗ್ಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ವೀಣಾ ಕುಮಾರಿ ವೈಯಕ್ತಿಕ ಗೀತೆಯನ್ನು ಹಾಡಿದರು. ಪುತ್ತೂರಿನ ಪ್ರಸಿದ್ಧ ನಾಟಿವೈದ್ಯೆ ಶ್ರೀಮತಿ ಸುಲೋಚನಾ ಅವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಅಕ್ಷತಾ ಪಿ ಸನ್ಮಾನಿತರ ಪರಿಚಯ ವಾಚಿಸಿದರು. ಶ್ರೀಮತಿ ಸಂಗೀತ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ಕವಿತಾ ಕೆ. ಮಾತೆಯರಿಗೆ ಸಂಕಲ್ಪ ಮಾಡಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾ ಕೆ. ಹಾಗೂ ಕೆ.ಜಿ. ವಿಭಾಗದ ಮುಖ್ಯಸ್ಥೆ ಶ್ರೀಮತಿ ಮಮತಾ ಬಿ. ಉಪಸ್ಥಿತರಿದ್ದರು.
ಶ್ರೀಮತಿ ರೇಷ್ಮಾ ಟಿ. ಪ್ರಾರ್ಥಿಸಿ, ಕು. ಅನಿತಾ ಕೆ. ಸ್ವಾಗತಿಸಿ, ಶ್ರೀಮತಿ ಸಂಧ್ಯಾ ಎ. ವಂದಿಸಿದರು. ಶ್ರೀಮತಿ ಪುಷ್ಪಲತಾ ಕೆ. ಕಾರ್ಯಕ್ರಮ ನಿರೂಪಿಸಿದರು.