ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದಲ್ಲಿ ಶಾಂತಿವನ ಟ್ರಸ್ಟ್(ರಿ.) ವತಿಯಿಂದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳು
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದಲ್ಲಿ ಇಲ್ಲಿ ದಿನಾಂಕ 11-11-2025ನೇ ಮಂಗಳವಾರದಂದು ಶಾಂತಿವನ ಟ್ರಸ್ಟ್(ರಿ.) ವತಿಯಿಂದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪುತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿ ಇವರು ಉದ್ಘಾಟಕರಾಗಿದ್ದು, ಉದ್ಘಾಟನಾ ಭಾಷಣ ಗೈದರು. ಮುಖ್ಯ ಅತಿಥಿಗಳಾಗಿ ಶ್ರೀ ವಿಷ್ಣುಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪುತ್ತೂರು ಮತ್ತು ಪ್ರಜ್ವಲ್ ರೈ ಕೈಕಾರ, ಗೌರವಾಧ್ಯಕ್ಷರು, ಸಹ್ಯಾದ್ರಿ ಯುವಕ ಮಂಡಲ, ಕೈಕಾರ ಇವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿಯವರನ್ನು ವಿಶೇಷವಾಗಿ ಗೌರವಿಸಲಾಯಿತು.
ಶ್ರೀ ಶಶಿಕಾಂತ್ ಜೈನ್, ನಿರ್ದೇಶಕರು, ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀ ನಾರಾಯಣ ರೈ ಕುಕ್ಕುವಳ್ಳಿ, ಮಕ್ಕಳ ಸಾಹಿತಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇದರ ಮುಖ್ಯಗುರು ಶ್ರೀ ಸತೀಶ್ ಕುಮಾರ್ ರೈ ಮತ್ತು ಡಾ.ಶೋಭಿತಾ ಸತೀಶ್, ಪ್ರಾಂಶುಪಾಲರು, ಬಿ.ಎಡ್ ಕಾಲೇಜು, ತೆಂಕಿಲ, ಪುತ್ತೂರು ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಡಾ.ಶಿವಪ್ರಕಾಸ್.ಎಂ, ಅಧ್ಯಕ್ಷರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು. ಶ್ರೀ ರಾಮಣ್ಣ.ರೈ ಮುಖ್ಯಗುರುಗಳು. ಕೈಕಾರ ಶಾಲೆ ಇವರು ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು. ಸ್ವಾನಿ.ಡಿ, ಮೇಘ ಮತ್ತು ಅಹನ ಇವರು ಪ್ರಾರ್ಥಿಸಿದರು. ಸಹಶಿಕ್ಷಕಿ ಶ್ರೀಮಾತಿ ಯಶೋಧ.ಕೆ ಇವರು ಕಾರ್ಯಕ್ರಮ ನಿರೂಪಿಸಿ, ಸಹಶಿಕ್ಷಕಿ ಶ್ರೀಮತಿ ಲತಾ ಕುಮಾರಿ ಸಹಕರಿಸಿದರು.