ಪುತ್ತೂರು ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ನಗರ ವಲಯ ಮಟ್ಟದ 14 ಮತ್ತು 17 ರ ವಯೋಮಾನದ ಬಾಲಕ ಮತ್ತು ಬಾಲಕಿಯರ ಶಟಲ್ ಬ್ಯಾಟ್ಮಿಂಟನ್ ಪಂದ್ಯಾಟವು ದಿನಾಂಕ 19- 08- 2025ನೇ ಮಂಗಳವಾರ ಸುದಾನ ಸ್ಪೋರ್ಟ್ಸ್ ಕ್ಲಬ್ ಸಾಮೆತಡ್ಕ, ಪುತ್ತೂರು ಇಲ್ಲಿ ನಡೆಯಿತು.
ಉದ್ಘಾಟನಾ ಸಮಾರಂಭವನ್ನು ಶ್ರೀ ಚಕ್ರಪಾಣಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇವರು ನೆರವೇರಿಸಿದರು.
ವೇದಿಕೆಯಲ್ಲಿ ಅತಿಥಿಗಳಾದ ಶ್ರೀಮತಿ ಶಶಿಕಲಾ ಎಸ್, ಸಿ ಆರ್ ಪಿ ಪುತ್ತೂರು ನಗರ, ಶ್ರೀ ನರೇಶ್ ಲೋಬೋ ನೋಡಲ್ ಅಧಿಕಾರಿ ಪ್ರೌಢಶಾಲಾ ವಿಭಾಗ ಪುತ್ತೂರು, ಶ್ರೀಮತಿ ಕುಸುಮಾವತಿ ನೋಡಲ್ ಅಧಿಕಾರಿ ಪ್ರಾಥಮಿಕ ವಿಭಾಗ ಪುತ್ತೂರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸತೀಶ್ ಕುಮಾರ್ ರೈ ಮುಖ್ಯೋಪಾಧ್ಯಾಯರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇವರು ವಹಿಸಿಕೊಂಡಿದ್ದರು. ಹಾಗೂ ವೇದಿಕೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣಯ್ಯ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ವಾಣಿಶ್ರೀ ದೈಹಿಕ ಶಿಕ್ಷಣ ಶಿಕ್ಷಕಿ, ಸ್ವಾಗತ ಭಾಷಣವನ್ನು ಶ್ರೀ ಭಾಸ್ಕರ್ ಗೌಡ ಎಂ ದೈಹಿಕ ಶಿಕ್ಷಕ, ಧನ್ಯವಾದ ಶ್ರೀಮತಿ ಪೂಜಾಶ್ರೀ ದೈಹಿಕ ಶಿಕ್ಷಕಿ ಇವರು ನೆರವೇರಿಸಿದರು.
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ಶ್ರೀ ಕೃಷ್ಣಯ್ಯ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷರು ವಹಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯರು ಶ್ರೀ ಸತೀಶ್ ಕುಮಾರ್ ರೈ ಹಾಗೂ ಶ್ರೀ ನರೇಶ್ ಲೋಬೋ ನೋಡಲ್ ಅಧಿಕಾರಿ ಪ್ರೌಢಶಾಲಾ ವಿಭಾಗ, ಪುತ್ತೂರು ಇವರು ನೆರವೇರಿಸಿದರು.
ಸಮಾರೋಪ ಸಮಾರಂಭ ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಶ್ರೀಮತಿ ಆಶಾಲತಾ ದೈಹಿಕ ಶಿಕ್ಷಣ ಶಿಕ್ಷಕಿ ಧನ್ಯವಾದವನ್ನು ಶ್ರೀಮತಿ ರಶ್ಮಿ, ದೈಹಿಕ ಶಿಕ್ಷಣ ಶಿಕ್ಷಕಿ ಇವರು ನಿರ್ವಹಿಸಿದರು. ದೈಹಿಕ ಶಿಕ್ಷಕರಾದ ರೀವಣ್ ರಾಜ್ ಸಹಕರಿಸಿದರು ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ವಾಣಿಶ್ರೀ ದೈಹಿಕ ಶಿಕ್ಷಣ ಶಿಕ್ಷಕಿ ನಿರ್ವಹಿಸಿದರು.