Cancel Preloader
  • Call: 08251 – 232015
  • Email: school.vem@gmail.com
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
  • 08251 – 232015
  • 09449 - 678333
  • Email: school.vem@gmail.com

News & Events

  • Home
  • News & Events

ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

Gallery Image

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಂಗಳೂರು ಇದರ ವತಿಯಿಂದ ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಆಶ್ರಯದಲ್ಲಿ ಸೆಕ್ರೆಟ್ ಹಾರ್ಟ್ ಕಾಲೇಜು ಮಡಂತ್ಯಾರು ಇದರ ಒಳಾಂಗಣ ಕ್ರೀಡಾಂಗಣದಲ್ಲಿ ಸಪ್ಟೆಂಬರ್ 3 ರಂದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14ರ ಮತ್ತು 17ರ ವಯೋಮಾನದ ಶಾಲಾ ಬಾಲಕ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಜರುಗಿತ್ತು.

ಪಂದ್ಯಾಟದಲ್ಲಿ ಪುತ್ತೂರು ತಾಲೂಕಿನ 17ರ ವಯೋಮಾನದ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ತಂಡಗಳು ಪ್ರತಿನಿಧಿಸಿ ಭಾಗವಹಿಸಿದ್ದವು. ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ದಕ್ಷಿಣ ಕನ್ನಡ ಜಿಲ್ಲೆಯನ್ನು ಚಾಮರಾಜ ನಗರದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಮೈಸೂರು ವಿಭಾಗ ಮಟ್ಟದ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಲಿರುವರು.

17 ವಯೋಮಾನದ ಬಾಲಕರ ವಿಭಾಗದಲ್ಲಿ ಈಶಾನ್ ಕೆ 10ನೇ ತರಗತಿ (ಶ್ರೀ ನಾರಾಯಣ ಮೂರ್ತಿ ಮತ್ತು ಶ್ರೀಮತಿ ಪ್ರೇಮಲತಾ ದಂಪತಿಗಳ ಪುತ್ರ) ಜಶ್ ಹೆಚ್ ಬಿ 9ನೇ ತರಗತಿ (ಶ್ರೀ ಹೇಮಚಂದ್ರ ಬಿ ಮತ್ತು ಶ್ರೀಮತಿ ಶುಭಶ್ರೀ ದಂಪತಿಗಳ ಪುತ್ರ). ಆದ್ಯನ್ ಆರ್ ಒಂಬತ್ತನೇ ತರಗತಿ (ಶ್ರೀ ಎ ರಂಜಿತ್ ಮತ್ತು ಶ್ರೀಮತಿ ವತ್ಸಲ ದಂಪತಿಗಳ ಪುತ್ರ) ಹಾಗೂ 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಆರ್ ಅನ್ವಿಕ ರಾಜ್ 8ನೇ ತರಗತಿ (ಶ್ರೀ ರಾಜೇಶ್ ಎ ಮತ್ತು ಶ್ರೀಮತಿ ಯಶಸ್ವಿನಿ ದಂಪತಿಗಳ ಪುತ್ರಿ). ಸಾನ್ವಿ ಆನಂದ್ ಒಂಬತ್ತನೇ ತರಗತಿ (ಶ್ರೀ ಆನಂದ ಮತ್ತು ಶ್ರೀಮತಿ ವಾಣಿಶ್ರೀ ಎನ್ ದಂಪತಿಗಳ ಪುತ್ರಿ). ಹಿಮಶ್ರೀ 9ನೇ ತರಗತಿ (ಶ್ರೀ ಮೋಹನ್ ಗೌಡ ಮತ್ತು ಶ್ರೀಮತಿ ಮೋಹಿನಿ ಕೆ ದಂಪತಿಗಳ ಪುತ್ರಿ ) ಇವರುಗಳು ಭಾಗವಹಿಸಿದ್ದರು

ಇದರಲ್ಲಿ ಆರ್ ಅನ್ವಿಕರಾಜ್, ಇಶಾನ್ ಕೆ ಮತ್ತು ಜಶ್ ಎಚ್ ಬಿ ಇವರು ವಿಭಾಗ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲೆಯ ಮುಖ್ಯ ಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಅವರು ತಿಳಿಸಿರುತ್ತಾರೆ

Vivekananda English Medium School

VIVEKANANDA ENGLISH MEDIUM SCHOOL
A unit of Vivekananda Vidhyavardhaka Sangha(R.)
VIVEKANAGARA, TENKILA, PUTTUR –574201

Links

  • Home
  • About Us
  • Management
  • Contact Us

Links

  • Facilities
  • & News Events
  • Gallery
  • Alumni

Contacts

  • Call:08251 – 232015
  • Call:09449 - 678333
  • Email:school.vem@gmail.com

Copyright 2022 Vivekananda English Medium School Designed By Websoft - Mangalore. All Rights Reserved