ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ವಿಜ್ಞಾನ ವಿಚಾರ ಗೋಷ್ಠಿ ಸ್ಪರ್ಧೆ 2025-26
ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆ, ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ಮೂಲಕ ಆಯೋಜಿಸಿರುವ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ವಿಜ್ಞಾನ ವಿಚಾರ ಗೋಷ್ಠಿಯು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೊಡಿಯಾಲ್ಬೈಲ್, ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 10.10.2025 ರಂದು ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರೌಢ ಶಾಲೆಗಳಿಂದ ತಾಲೂಕು ಮಟ್ಟದ ಪ್ರಥಮ ಮತ್ತು ದ್ವಿತೀಯ ಸ್ಥಾನ ವಿಜೇತ ವಿದ್ಯಾರ್ಥಿಗಳು ಭಾಗವಹಿಸಿ “ಕ್ವಾಂಟಮ್ ಯುಗದ ಆರಂಭ: ಸಾಮರ್ಥ್ಯಗಳು ಮತ್ತು ಸವಾಲುಗಳು” ಎಂಬ ವಿಚಾರದ ಬಗ್ಗೆ ವಿಷಯವನ್ನು ಮಂಡಿಸಿದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ 9ನೇ ತರಗತಿ ವಿದ್ಯಾರ್ಥಿ ಅತೀತ್ಹೆಚ್. ರೈ( ಶ್ರೀ ಹರೀಶ್ ರೈ ಮತ್ತು ಶ್ರೀಮತಿ ಜಲಜಾ ಹೆಚ್ ರೈ ದಂಪತಿ ಪುತ್ರ) ಅವರ ವಿಷಯ ಮಂಡನೆಗೆ ದ್ವಿತೀಯ ಸ್ಥಾನ ಲಭಿಸಿರುವುದು ಶಾಲೆಗೆ ಅತ್ಯಂತ ಕೀರ್ತಿದಾಯಕವಾಗಿದೆ. ಅತೀತ್ ಅವರ ಪ್ರಸ್ತುತಿಯನ್ನು ತೀರ್ಪುಗಾರರು ಜ್ಞಾನ ಸಮೃದ್ಧಿ ಮತ್ತು ಪರಿಣಾಮಕಾರಿಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಅತೀತ್ ರೈ ಅವರ ಈ ಶ್ರೇಷ್ಠ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಪುತ್ತೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ಶಿಕ್ಷಕೇತರವೃಂದ ರಕ್ಷಕಶಿಕ್ಷಕ ಸಂಘದ ಪದಾಧಿಕಾರಿಗಳು, ಸದಸ್ಯರು ಸಲ್ಲಿಸುತ್ತಾರೆ