Cancel Preloader
  • Call: 08251 – 232015
  • Email: school.vem@gmail.com
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
  • 08251 – 232015
  • 09449 - 678333
  • Email: school.vem@gmail.com

News & Events

  • Home
  • News & Events

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಾಂತೀಯ ಮಟ್ಟಕ್ಕೆ ಆಯ್ಕೆ:

Gallery Image

ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗಣಿತ - ವಿಜ್ಞಾನ ಮೇಳ, ಸಂಸ್ಕೃತಿ ಮಹೋತ್ಸವವು ವಿವೇಕಾನಂದ ಸೆಂಟ್ರಲ್ ಸ್ಕೂಲ್ ನೆಹರು ನಗರ ಪುತ್ತೂರು ಇಲ್ಲಿ13/08/2026ರಂದು ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.

ಬಾಲ ವರ್ಗದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ‘ವಿದ್ಯುತ್ ಶಕ್ತಿ ಸಂರಕ್ಷಣೆ’ ಎಂಬ ವಿಷಯದಲ್ಲಿ 6ನೇ ತರಗತಿಯ ವಿಹಾನ್ ಆರ್ ಕೆ (ಶ್ರೀ ರಾಜೇಶ್ ಕೆ ಮತ್ತು ಶ್ರೀಮತಿ ಅಕ್ಷತಾ ಎ ಪಿ ದಂಪತಿ ಪುತ್ರ) ಪ್ರಥಮ ಸ್ಥಾನ, ಸೆನ್ಸಾರ್ ವಿಜ್ಞಾನ ಮಾದರಿ ತಯಾರಿಯಲ್ಲಿ 7ನೇ ತರಗತಿಯ ನಿಶಾಮ್ ಬೈಲಾಡಿ ( ಶ್ರೀ ಮಹೇಶ್ ಬೈಲಾಡಿ ಮತ್ತು ಶ್ರೀಮತಿ ಸವಿತಾ ಕೆ ಎ ದಂಪತಿ ಪುತ್ರ) ದ್ವಿತೀಯ ಸ್ಥಾನ, ‘ಘರ್ಷಣೆ: ಮಿತ್ರ ಮತ್ತು ಶತ್ರು’ ಎಂಬ ವಿಷಯದಲ್ಲಿ 6ನೇ ತರಗತಿಯ ತ್ರಿಶಾನ್ ಬಿ ಶೆಟ್ಟಿ ( ಶ್ರೀ ಭಾಸ್ಕರ್ ಬಿ ಶೆಟ್ಟಿ ಮತ್ತು ಶ್ರೀಮತಿ ಆಶಾ ಕೆ ಶೆಟ್ಟಿ ದಂಪತಿ ಪುತ್ರ) ತೃತೀಯ ಸ್ಥಾನ ಮತ್ತು ಸಂಸ್ಕೃತಿ ಮಹೋತ್ಸವದ ‘ಕಥಾ ಕಥನ’ ಸ್ಪರ್ಧೆಯಲ್ಲಿ 7ನೇ ತರಗತಿಯ ಆರಾಧ್ಯ ಕೃಷ್ಣ( ಶ್ರೀ ಕೃಷ್ಣಪ್ರಸಾದ ಮತ್ತು ಶ್ರೀವಿದ್ಯಾ ಎಂ ಕೆ ದಂಪತಿ ಪುತ್ರಿ) ತೃತೀಯ ಸ್ಥಾನ ಪಡೆದಿರುತ್ತಾರೆ.

ಕಿಶೋರ ವರ್ಗದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ‘ಸೆನ್ಸಾರ್ ವಿಜ್ಞಾನ ‘ಮಾದರಿ’ ಎಂಬ ವಿಷಯದಲ್ಲಿ 10ನೇ ತರಗತಿಯ ಕ್ಷಮೇತ್ ಜೈನ್ ( ಶ್ರೀ ಹನೀಶ್ ಕುಮಾರ್ ಮತ್ತು ಶ್ರೀಮತಿ ಶ್ರುತಿ ಕುಮಾರಿ ವೈ ದಂಪತಿ ಪುತ್ರ) ಪ್ರಥಮ ಸ್ಥಾನ, ‘ಚಲನೆ ಆಧಾರಿತ ಮಾದರಿ’ ಎಂಬ ವಿಷಯದಲ್ಲಿ 9ನೇ ತರಗತಿಯ ಸಾನ್ವಿ ಡಿ ( ಶ್ರೀ ದೀಪಕ್ ಕೆ ಮತ್ತು ಶ್ರೀಮತಿ ಯಶೋಧ ಕೆ ದಂಪತಿ ಪುತ್ರಿ) ದ್ವಿತೀಯ ಸ್ಥಾನ, ‘ಮಾನವನ ಹೃದಯದ ಕಾರ್ಯವಿಧಾನ’ ವಿಷಯದಲ್ಲಿ 10ನೇ ತರಗತಿಯ ನಮೀಶ್ ಪೂಜಾರಿ ( ಶ್ರೀ ಸತೀಶ್ ಪೂಜಾರಿ ಮತ್ತು ಶ್ರೀಮತಿ ಜಯಶ್ರೀ ದಂಪತಿ ಪುತ್ರ) ತೃತೀಯ ಸ್ಥಾನ, ‘ವಿಜ್ಞಾನ ಪ್ರಯೋಗ’ ಸ್ಪರ್ಧೆಯಲ್ಲಿ 10ನೇ ತರಗತಿಯ ವೈಷ್ಣಿ ರೈ ( ಶ್ರೀ ಜಗನ್ನಾಥ ಎಂ ಮತ್ತು ಶ್ರೀಮತಿ ಸೀಮಾ ಜೆ ರೈ ದಂಪತಿ ಪುತ್ರಿ) ದ್ವಿತೀಯ ಸ್ಥಾನ, ‘ಗಣಿತ ಪತ್ರವಾಚನ’ ಸ್ಪರ್ಧೆಯಲ್ಲಿ 10ನೇ ತರಗತಿಯ ಅತೀತ್ ಹೆಚ್ ರೈ ( ಶ್ರೀ ಹರೀಶ್ ರೈ ಪಿ ಮತ್ತು ಶ್ರೀಮತಿ ಜಲಜ ಹೆಚ್ ರೈ ದಂಪತಿ ಪುತ್ರ) ಪ್ರಥಮ ಸ್ಥಾನ, ಗಣಿತ ಮಾದರಿ ತಯಾರಿ ಸ್ಪರ್ಧೆಯಲ್ಲಿ ‘ಪ್ರಮೇಯ ಹಾಗೂ ಉಪ ಪ್ರಮೇಯ ಸಿದ್ಧಾಂತಗಳ ಆಧಾರಿತ ಪ್ರತಿರೂಪ’ ವಿಷಯದಲ್ಲಿ 10ನೇ ತರಗತಿಯ ನಾಗಭೂಷಣ ಕಿಣಿ (ಶ್ರೀ ನಾಗರಾಜ್ ಕಿಣಿ ಮತ್ತು ಶ್ರೀಮತಿ ನಮ್ರತಾ ಕಿಣಿ ದಂಪತಿ ಪುತ್ರ) ತೃತೀಯ ಸ್ಥಾನ, ಸಂಸ್ಕೃತಿ ಮಹೋತ್ಸವದ ‘ರಸಪ್ರಶ್ನೆ’ ಸ್ಪರ್ಧೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯರಾದ ಚಿಂತನ ಎಂ ( ಶ್ರೀ ಸೀತಾರಾಮ ಎಂ ಮತ್ತು ಶ್ರೀಮತಿ ಸರೋಜ ಕೆ ದಂಪತಿ ಪುತ್ರಿ), ಸಾಯಿ ಪ್ರಿಯ ಎಚ್( ಡಾ. ಶಿವಾನಂದ ಎಚ್ ಮತ್ತು ಶ್ರೀಮತಿ ಅರ್ಪಣಾ ಎಸ್ ಭಟ್ ದಂಪತಿ ಪುತ್ರಿ) ಮತ್ತು ನಿನಾದ ಎಂ ಎನ್ ( ಶ್ರೀ ಎಮ್ ಕೆ ನವೀನ್ ಕುಮಾರ್ ಮತ್ತು ಅರ್ಚನ ಬಿ ವಿ ದಂಪತಿ ಪುತ್ರಿ) ಇವರ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತದೆ.

ಬಾಲ ವರ್ಗ ಹಾಗೂ ಕಿಶೋರ ವರ್ಗ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಪ್ರಾಂತ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Vivekananda English Medium School

VIVEKANANDA ENGLISH MEDIUM SCHOOL
A unit of Vivekananda Vidhyavardhaka Sangha(R.)
VIVEKANAGARA, TENKILA, PUTTUR –574201

Links

  • Home
  • About Us
  • Management
  • Contact Us

Links

  • Facilities
  • & News Events
  • Gallery
  • Alumni

Contacts

  • Call:08251 – 232015
  • Call:09449 - 678333
  • Email:school.vem@gmail.com

Copyright 2022 Vivekananda English Medium School Designed By Websoft - Mangalore. All Rights Reserved