ಅಂತಾರಾಷ್ರೀಯ ಒಲಿಂಪಿಯಾಡ್ನಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ವಿಶೇಷ ಸಾಧನೆ
2021-22ನೆ ಸಾಲಿನ ಅಂತಾರಾಷ್ರೀಯ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಅತ್ಯುತ್ತಮವಾದ ಸಾಧನೆಗಳನ್ನು ಮಾಡಿದ್ದಾರೆ.
8ನೇ ತರಗತಿಯ ಚಿನ್ಮಯಿ.ಎಲ್(ಡಾ.ಕೃಷ್ಣಪ್ರಸಾದ್ ಮತ್ತು ಡಾ.ಅಮೃತಪ್ರಸಾದ್ ದಂಪತಿಗಳ ಪುತ್ರಿ) ಅವರು ಅಂತಾರಾಷ್ರೀಯ ಇಂಗ್ಲೀಷ್, ಸಾಮಾನ್ಯ ಜ್ಞಾನ, ಗಣಿತ, ಸಮಾಜ ಅಧ್ಯಯನ ಹಾಗೂ ರಾಷ್ರೀಯ ವಿಜ್ಞಾನ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ 3 ಚಿನ್ನ, 2 ಬೆಳ್ಳಿಯ ಪದಕಗಳನ್ನು ಪಡೆದಿದ್ದು ಅಂತಾರಾಷ್ರೀಯ ಮಟ್ಟದಲ್ಲಿ ಗಳಿಸಿರುವ ಅತ್ಯುತ್ತಮ ರ‍್ಯಾಂಕ್ಗಾಗಿ ನೀಡಲ್ಪಡುವ ವಿಶೇಷ ಬಹುಮಾನ ಗಿಫ್ಟ್ ವೋಚರ್ ಮತ್ತು ಅಕಾಡೆಮಿಕ್ ಎಕ್ಸ್ಲೆನ್ಸಿ ಅವಾರ್ಡ್ಗಳನ್ನು ಪಡೆದಿರುತ್ತಾರೆ.
5ನೇ ತರಗತಿಯ ನೇಶ ಕಾವ್ಯ ಮುಗೇರ್(ರಮೇಶ್ ಮುಗೇರ್ ರಾವ್ ಮತ್ತು ಕೃಪಾರಾಣಿ.ಎಸ್ ದಂಪತಿಗಳ ಪುತ್ರಿ) , 3ನೇ ತರಗತಿಯ ಶಶಾಂಕ್.ಟಿ.ಆರ್ (ಟಿ.ಎಸ್.ರಘುರಾಮ ಮತ್ತು ದೀಪ್ತಿ.ಆರ್.ಭಟ್ ದಂಪತಿಗಳ ಪುತ್ರ), 7ನೇ ತರಗತಿಯ ಯತಿನ್ ಬಿ.ಎಸ್(ಶೇಷಪ್ಪ ಗೌಡ.ಎಚ್ ಮತ್ತು ಹೇಮಾವತಿ.ಜಿ ದಂಪತಿಗಳ ಪುತ್ರಿ), 2ನೇ ತರಗತಿಯ ತನ್ವಿ.ಎಲ್ (ಡಾ.ಕೃಷ್ಣಪ್ರಸಾದ್ ಮತ್ತು ಡಾ.ಅಮೃತಪ್ರಸಾದ್ ದಂಪತಿಗಳ ಪುತ್ರಿ) ಇವರು ಚಿನ್ನ, ಬೆಳ್ಳಿ ಹಾಗೂ ಗಿಫ್ಟ್ ವೋಚರ್ಗಳನ್ನು ಪಡೆದಿರುತ್ತಾರೆ.
ಕಳೆದ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಾದ ಆತ್ಮೀಯ.ಎಂ.ಕಶ್ಯಪ್, ಶಿವಚೇತನ್ ಹಳಮನಿ, ಅಭೀಜ್ಞ. ಆರ್, ರಾಮಮೋಹನ ಮತ್ತು ಪಂಕಜ್ ಭಟ್ ಇವರು ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಚಿನ್ನ, ಬೆಳ್ಳಿ ಹಾಗೂ ಗಿಫ್ಟ್ ವೋಚರ್ಗಳನ್ನು ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.