ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನದಲ್ಲಿ ಅಂಕ ಗಳಿಕೆ:
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಾನ್ವಿ ಎಸ್ ಪ್ರಭು ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ
2025-26ನೇ ಸಾಲಿನ ಹತ್ತನೇ ತರಗತಿಯ ಅಂತಿಮ ಪರೀಕ್ಷೆಯ ಫಲಿತಾಂಶ ಬಂದಾಗ 618 ಅಂಕ ಗಳಿಸಿದ್ದ ಸಾನ್ವಿ ಎಸ್ ಪ್ರಭು ಮರು ಮೌಲ್ಯ ಮಾಪನದ ಬಳಿಕ ಕನ್ನಡ ಹಾಗೂ ಇಂಗ್ಲೀಷಿನಲ್ಲಿ ಹೆಚ್ಚುವರಿ 4 ಅಂಕ ಗಳಿಸಿ, ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಇವರು ಇಂಗ್ಲೀಷ್, ಹಿಂದಿ, ವಿಜ್ಞಾನ ಮತ್ತು ಸಮಾಜದಲ್ಲಿ 100 ಅಂಕ ಗಳಿಸಿರುತ್ತಾರೆ. ಇವರು ಸಂತೋಷ ಕುಮಾರ ಎ ಮತ್ತು ಸವಿತಾ ಕೆ ದಂಪತಿಗಳ ಪುತ್ರಿ.