ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ಕ್ಷಮೇತ್ ಜೈನ್ ರಾಜ್ಯ ಸ್ತರೀಯ ಬಾಲ ವೈಜ್ಞಾನಿಕ ಪ್ರದರ್ಶನಿ 2025–26 ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ:
ಪುತ್ತೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ 10ನೇ ತರಗತಿಯ ವಿದ್ಯಾರ್ಥಿ ಕ್ಷಮೇತ್ ಜೈನ್ ಇವನ 'ರಾಜ್ಯ ಸ್ತರೀಯ ಬಾಲ ವೈಜ್ಞಾನಿಕ ಪ್ರದರ್ಶನಿ 2025–26’ ಸ್ಪರ್ಧೆಯಲ್ಲಿ 'ವಿಕಸಿತ ಮತ್ತು ಆತ್ಮನಿರ್ಭರ ಭಾರತಕ್ಕಾಗಿ STEM' ಎಂಬ ಪರಿಕಲ್ಪನೆಯಡಿಯಲ್ಲಿ ‘ಆರೋಗ್ಯ ಮತ್ತು ನೈರ್ಮಲ್ಯ’ ವಿಜ್ಞಾನ ಮಾದರಿಯನ್ನು ಪ್ರಸ್ತುತಪಡಿಸಿರುತ್ತಾನೆ. ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾನೆ.
ಕ್ಷಮೇತ್ ಜೈನ್ (ಶ್ರೀಮತಿ ಶ್ರುತಿ ಕುಮಾರಿ ಮತ್ತು ಹನೀಶ್ ಕುಮಾರ್ ದಂಪತಿ ಪುತ್ರ )ತಯಾರಿಸಿರುವ ವಿಜ್ಞಾನ ಮಾದರಿಯು ಆರೋಗ್ಯ ಮತ್ತು ನೈರ್ಮಲ್ಯದ ಜೊತೆಗೆ ಕಲುಷಿತ ವಾತಾವರಣಕ್ಕೆ ಪರಿಸರ ಸ್ನೇಹಿ ಪರಿಹಾರಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ.
ಮೊದಲ ಹಂತದ ಸ್ಪರ್ಧೆಯು ಆನ್ಲೈನ್ ಮೂಲಕ ನಡೆಯಲ್ಪಟ್ಟಿದ್ದು, ಅದನ್ನು ಯಶಸ್ವಿಯಾಗಿ ಪೂರೈಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.