ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ವಿದ್ಯಾರ್ಥಿ ರಾಷ್ಟ್ರೀಯ ಬಾಲ ವೈಜ್ಞಾನಿಕ ಪ್ರದರ್ಶಿನಿ - 2026 ಸ್ಪರ್ಧೆಗೆ ಆಯ್ಕೆ:
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ (NCERT) ವತಿಯಿಂದ ನಡೆಸಲ್ಪಡುವ 53 ನೇ ರಾಷ್ಟ್ರೀಯ ಬಾಲ ವೈಜ್ಞಾನಿಕ ಪ್ರದರ್ಶನಿ 2026 ರ ಅಂಗವಾಗಿ ನಡೆದ ರಾಜ್ಯ ಮಟ್ಟದ ಬಾಲ ವೈಜ್ಞಾನಿಕ ಪ್ರದರ್ಶನಿ 2025–26 ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ಹತ್ತನೇ ತರಗತಿಯ ವಿದ್ಯಾರ್ಥಿ ಕ್ಷಮೇತ್ ಜೈನ್ (ಶ್ರೀ ಹನೀಶ್ ಕುಮಾರ್ ಜೈನ್ ಮತ್ತು ಶ್ರೀಮತಿ ಶೃತಿ ಕುಮಾರಿ ದಂಪತಿಗಳ ಪುತ್ರ) ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ರಾಜ್ಯಮಟ್ಟದ ಸ್ಪರ್ಧೆಯು 18/09/2026 ಮತ್ತು 19/09/2026 ರಂದು ಡಿಎಸ್ಇಆರ್‌ಟಿ ಹೊಸಕೆರೆಹಳ್ಳಿ ಮೂರನೇ ಹಂತ ಬನಶಂಕರಿ ಬೆಂಗಳೂರು ಇಲ್ಲಿ ನಡೆದಿದ್ದು , ‘ಹೆಲ್ತ್ ಅಂಡ್ ಹೈಜಿನ್’ ಎಂಬ ಉಪ ವಿಷಯದಲ್ಲಿ ಉತ್ತಮ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ರಾಷ್ಟ್ರಮಟ್ಟದ ಸ್ಪರ್ಧೆಗಳು ನವ ದೆಹಲಿಯಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆಯಲಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.