ವಿವೇಕ ಕ್ರೀಡಾ ಸಂಭ್ರಮ - 2024=25
ದಿನಾಂಕ ನವೆಂಬರ್ 28 & 29 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕ ಕ್ರೀಡಾಕೂಟವು ನೆರವೇರಿತು. ಈ ಕ್ರೀಡಾಕೂಟದ ಗೌರವ ವಂದನೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಪುನೀತ್ ರೈ ಕುರಿಯ ಸ್ವೀಕರಿಸಿದರು.ಈ ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಿವೇಕಾನಂದ ವಸತಿ ನಿಲಯದ ಅಧ್ಯಕ್ಷರಾದ ರಮೇಶ್ ಪ್ರಭು ಇವರು ವಹಿಸಿದರು. ಉದ್ಘಾಟನೆಯನ್ನು ವಿವೇಕಾನಂದ ಪಿ ಯು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಯತೀಶ್ ಕುಮಾರ್ ಬಿ ನೆರವೇರಿಸಿದರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ ಕಜೆ ಇವರು ಧ್ವಜಾರೋಹಣ ಗೈದು ಕ್ರೀಡಾ ಜ್ಯೋತಿ ಬೆಳಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಡಾ. ಶಿವಪ್ರಕಾಶ್. ಎಂ ಸಂಚಾಲಕರಾದ ರವಿನಾರಾಯಣ.ಎಂ ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪ್ರಶಾಂತ್ ಆಚಾರ್ ಹಾಗೂ ಸದಸ್ಯರು, ಮತ್ತು ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರಶ್ಮಿ ಹೆಚ್. ಕೆ. ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಭಾಸ್ಕರ್ ಗೌಡ ಎಂ ಸ್ವಾಗತಿಸಿ ವಂದನಾರ್ಪಣೆಯನ್ನು ಶ್ರೀಮತಿ ವಾಣಿಶ್ರೀ ಮಾಡಿದರು.