Cancel Preloader
  • Call: 08251 – 232015
  • Email: school.vem@gmail.com
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
  • 08251 – 232015
  • 09449 - 678333
  • Email: school.vem@gmail.com

News & Events

  • Home
  • News & Events

ವಿದ್ಯಾಭಾರತಿ ಕ್ರೀಡಾ ಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ.

Gallery Image

ವಿದ್ಯಾಭಾರತಿ ಕರ್ನಾಟಕ ವತಿಯಿಂದ ಸಪ್ಟೆಂಬರ್ 23 ಮತ್ತು 24ರಂದು ಮಂಗಳೂರಿನ ಮಂಗಳಾ ಸ್ಟೇಡಿಯಂ ನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳು ಹಾಗೂ ತಂಡ ಪ್ರಶಸ್ತಿ ಗಳಿಸಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಆತ್ಮಿ ಕೆ ಎಲ್ (ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಮತ್ತು ಅಶ್ವಿನಿ ದಂಪತಿಗಳ ಪುತ್ರಿ) 100, 200 ಮೀಟರ್, 4×100 ರಿಲೇ ಪ್ರಥಮ ಸ್ಥಾನ, ವಂಶಿತಾ (ವಸಂತ ಕುಮಾರ್ ಮತ್ತು ಸುಜಾತಾ ದಂಪತಿಗಳ ಪುತ್ರಿ) 600 ಮೀಟರ್ ಪ್ರಥಮ, 4×100 ರಿಲೇ ಪ್ರಥಮ, ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ, ದಿಶಾ ಬಿ (ಪುರುಷೋತ್ತಮ ಮತ್ತು ಸವಿತಾ ದಂಪತಿಗಳ ಪುತ್ರಿ) 80 ಮೀಟರ್ ಹರ್ಡಲ್ಸ್, 4×100 ರಿಲೇ ಪ್ರಥಮ ಸ್ಥಾನ, ನಿಶ್ಮಾ ( ಪ್ರದೀಪ್ ಮತ್ತು ಪ್ರಶಾಂತಿ ದಂಪತಿಗಳ ಪುತ್ರಿ) ಶಾಟ್ ಪುಟ್ ಮತ್ತು ಡಿಸ್ಕಸ್ ನಲ್ಲಿ ದ್ವಿತೀಯ ಸ್ಥಾನ, ಸಾನ್ವಿ ಆನಂದ್ ( ಆನಂದ್ ಮತ್ತು ವಾಣಿಶ್ರೀ ದಂಪತಿಗಳ ಪುತ್ರಿ) 4×100 ರಿಲೇಯಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ, ಮಾನ್ವಿ (ಪ್ರವೀಣ್ ಮತ್ತು ಪೂಜಾಲತಾ ದಂಪತಿಗಳ ಪುತ್ರಿ)
ಡಿಸ್ಕಸ್ ನಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ. 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಶರ್ವಿನ್ (ಚಿತ್ರನಾಯಗಂ ಮತ್ತು ಪ್ರವೀಣಾ ಕುಮಾರಿ ದಂಪತಿಗಳ ಪುತ್ರ) 80 ಮೀಟರ್ ಹರ್ಡಲ್ಸ್ ನಲ್ಲಿ ದ್ವಿತೀಯ, 4×100 ರಿಲೇ ಮತ್ತು ಡಿಸ್ಕಸ್ ನಲ್ಲಿ ತೃತೀಯ, ರಂಜಿತ್ ಪ್ರಭು ( ರವೀಂದ್ರ ಪ್ರಭು ಮತ್ತು ಸರಸ್ವತಿ ಪ್ರಭು ದಂಪತಿಗಳ ಪುತ್ರ) 4×100 ರಿಲೇ ಮತ್ತು ಉದ್ದಜಿಗಿತದಲ್ಲಿ ತೃತೀಯ, ಸಾಯಿಕೃಷ್ಣ (ಸತೀಶ್ ಶೆಟ್ಟಿ ಮತ್ತು ದೇವಿಕೃಪಾ ಶೆಟ್ಟಿ ದಂಪತಿಗಳ ಪುತ್ರ), 4×100 ರಿಲೇಯಲ್ಲಿ ತೃತೀಯ, ರಾಹುಲ್ (ಹರೀಶ್ ಮತ್ತು ಜಾನಕಿ ದಂಪತಿಗಳ ಪುತ್ರ) 4×100 ರಿಲೇಯಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ. 17ರ ವಯೋಮಾನದ ಬಾಲಕರಲ್ಲಿ ಕೃತಿಕ್ ಆರ್ ( ರಾಜೇಶ್ ಮತ್ತು ರೇಖಾ ದಂಪತಿಗಳ ಪುತ್ರ) 100 ಮೀಟರ್ ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನ ಹಾಗೂ ವೈಭವ್ ಕಾಮತ್ (ವಿದ್ಯಾಧರ್ ಕಾಮತ್ ಮತ್ತು ಮುಕ್ತಾ ಕಾಮತ್ ದಂಪತಿಗಳ ಪುತ್ರ) ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ.
17ರ ವಯೋಮಾನದ ಬಾಲಕಿಯರಲ್ಲಿ ದಿವಿಜ್ಞಾ (ಶಿವಪ್ರಸಾದ್ ಮತ್ತು ಪವಿತ್ರಾ ದಂಪತಿಗಳ ಪುತ್ರಿ) 100 ಮೀಟರ್, 200 ಮೀಟರ್, 400 ಮೀಟರ್ ಓಟ ಹಾಗೂ 4×400 ಮೀಟರ್ ರಿಲೇಗಳಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಆಯ್ಕೆಯಾಗಿರುತ್ತಾರೆ. ಕ್ಷಮಾ ಜೆ ರೈ (ಜಗದೀಶ ರೈ ಮತ್ತು ಶೋಭಾ ದಂಪತಿಗಳ ಪುತ್ರಿ) ಎತ್ತರ ಜಿಗಿತ ಹಾಗೂ 4×400 ಮೀಟರ್ ರಿಲೇಗಳಲ್ಲಿ ಪ್ರಥಮ ಸ್ಥಾನ, ಸಾನ್ವಿತಾ ನೆಕ್ಕರೆ (ಉಮೇಶ್ ಮತ್ತು ಕವಿತಾ ದಂಪತಿಗಳ ಪುತ್ರಿ) 400 ಮೀಟರ್ ಹರ್ಡಲ್ಸ್ ಹಾಗೂ 4×400 ಮೀಟರ್ ರಿಲೇಗಳಲ್ಲಿ ಪ್ರಥಮ ಸ್ಥಾನ, 3000 ಮೀಟರ್ ನಲ್ಲಿ ತೃತೀಯ ಸ್ಥಾನ, ಶ್ರೀರಕ್ಷಾ (ದೇವರಾಜ್ ಮತ್ತು ವಾಣಿಶ್ರೀ ದಂಪತಿಗಳ ಪುತ್ರಿ) 4×400 ಮೀಟರ್ ರಿಲೇಗಳಲ್ಲಿ ಪ್ರಥಮ ಸ್ಥಾನ, ನಿಧಿಶ್ರೀ (ದೇರಣ್ಣ ಗೌಡ ಮತ್ತು ಹೇಮಲತಾ ದಂಪತಿಗಳ ಪುತ್ರಿ) 100 ಮೀಟರ್ ಹರ್ಡಲ್ಸ್ ನಲ್ಲಿ ದ್ವಿತೀಯ ಸ್ಥಾನ, ಚಿಂತನಾ (ಗಿರೀಶ್ ರಾಜ್ ಮತ್ತು ಡಾ.ಧನೇಶ್ವರಿ ದಂಪತಿಗಳ ಪುತ್ರಿ) 100 ಮೀಟರ್ ಹರ್ಡಲ್ಸ್ ಹಾಗೂ ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ. ಮಾತ್ರವಲ್ಲದೇ 14ರ ವಯೋಮಾನ ಮತ್ತು 17ರ ವಯೋಮಾನದ ಬಾಲಕಿಯರು "ತಂಡಪ್ರಶಸ್ತಿ" ಗಳಿಸಿರುತ್ತಾರೆ. ಈ ಕ್ರೀಡಾಕೂಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ವಿಜೇತರು ಬೆಂಗಳೂರಿನಲ್ಲಿ ನಡೆಯಲಿರುವ ವಿದ್ಯಾಭಾರತಿ ಕರ್ನಾಟಕದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈಯವರು ತಿಳಿಸಿರುತ್ತಾರೆ.

Vivekananda English Medium School

VIVEKANANDA ENGLISH MEDIUM SCHOOL
A unit of Vivekananda Vidhyavardhaka Sangha(R.)
VIVEKANAGARA, TENKILA, PUTTUR –574201

Links

  • Home
  • About Us
  • Management
  • Contact Us

Links

  • Facilities
  • & News Events
  • Gallery
  • Alumni

Contacts

  • Call:08251 – 232015
  • Call:09449 - 678333
  • Email:school.vem@gmail.com

Copyright 2022 Vivekananda English Medium School Designed By Websoft - Mangalore. All Rights Reserved