ರಾಷ್ಟ್ರ ಮಟ್ಟದ INSEF ವಿಜ್ಞಾನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಮೃದ್ಧ್ ಆರ್ ಶೆಟ್ಟಿಗೆ ಕಂಚಿನ ಪದಕ
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅವಿಷ್ಕಾರಗಳ ಬಗ್ಗೆ ಆಸಕ್ತಿ ಮತ್ತು ಕ್ರೀಯಾಶೀಲತೆಯನ್ನು ಬೆಳೆಸುವ ಸಲುವಾಗಿ INSEF ವತಿಯಿಂದ ಜನವರಿ 11ರಂದು ಬೆಂಗಳೂರಿನ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆದ ರಾಷ್ಟಿçÃಯ ಮಟ್ಟದ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ವಿವೇಕಾನಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸಮೃದ್ಧ್ ಆರ್ ಶೆಟ್ಟಿ (ಶಿಕ್ಷಕ ದಂಪತಿ ಶ್ರೀ ರಾಮಚಂದ್ರ ಶೆಟ್ಟಿ ಮತ್ತು ಶ್ರೀಮತಿ ಶೋಭಾ ಶೆಟ್ಟಿ ಇವರ ಪುತ್ರ) ತೃತೀಯ ಸ್ಥಾನದೊಂದಿಗೆ ಕಂಚಿನ ಪದಕದಿಂದ ಪುರಸ್ಕöÈತಗೊಂಡಿರುತ್ತಾರೆ. ಇವರು ಜೂನಿಯರ್ ವಿಭಾಗದಲ್ಲಿ ಸೈನಿಕರಿಗೆ, ಸಶಸ್ತç ಪಡೆಗಳಿಗೆ ಅನುಕೂಲವಾಗಬಹುದಾದ “ಲ್ಯಾಂಡ್ ಮೈನಿಂಗ್ ಡಿಟೆಕ್ಟ್‍ರ್” ಎಂಬ ಅವಿಷ್ಕಾರವನ್ನು ಪ್ರಸ್ತುತ ಪಡಿಸಿರುತ್ತಾರೆ. ಇದೇ ಸ್ಪರ್ಧೆಗಳ ಸೀನಿಯರ್ ವಿಭಾಗದಲ್ಲಿ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸುಪ್ರಜಾ ರಾವ್ (ಉಪನ್ಯಾಸಕ ದಂಪತಿ ಶ್ರೀ ಪ್ರಶಾಂತ್ ರಾವ್ ಮತ್ತು ಶ್ರೀಮತಿ ಸುಮನಾ ರಾವ್ ಇವರ ಪುತ್ರಿ) ಭಾಗವಹಿಸಿದ್ದು ಈ “ನಾರಿಕೇಳ ದ ಹೀಲಿಂಗ್” ಎಂಬ ಮುಲಾಮು ತೀರ್ಪುಗಾರರ ಪ್ರಶಂಸೆಗೆ ಪಾತ್ರರಾಗಿರುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತದೆ.