ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ ಶೈಕ್ಷಣಿಕ ಪುನಶ್ಚೇತನಾ ಕಾರ್ಯಾಗಾರ - 2026-27ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ ಶಿಕ್ಷಕರಿಗಾಗಿ ನಡೆದ ಐದು ದಿನಗಳ ಶೈಕ್ಷಣಿಕ ಪುನಶ್ಚೇತನ ಕಾರ್ಯಗಾರದ ಸಮಾರೋಪ ಸಮಾರಂಭ:
ದಿನಾಂಕ 28/05/2026 ನೇ ಗುರುವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿ ಕಳೆದ ಸತತ ಐದು ದಿನಗಳಿಂದ ನಡೆದ ಶೈಕ್ಷಣಿಕ ಪುನಶ್ಚೇತನ ಕಾರ್ಯಗಾರವು ಸಂಪನ್ನಗೊಂಡಿದ್ದು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಸತೀಶ್ ರಾವ್ ಕಬಕ - ಉಪಾಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವರು ಇಂದಿನ ಕಾಲಘಟ್ಟದ ವಿದ್ಯಾರ್ಥಿಗಳ ಬೆಳವಣಿಗೆಗೆ ಶಿಕ್ಷಕರಿಗೆ ಕಾರ್ಯಗಾರವು ಅತ್ಯಂತ ಅಗತ್ಯವಾಗಿದ್ದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರ ಕಾರ್ಯಗಾರವು ಅತ್ಯಂತ ಅವಶ್ಯಕವಾಗಿದೆ. ವೃತ್ತಿ ಕೌಶಲ್ಯವನ್ನು ಉದ್ದೀಪನಗೊಳಿಸಲು ತರಬೇತಿಗಳು ಅತ್ಯಂತ ಸಹಕಾರಿಯಾಗಿವೆ. ತರಬೇತಿ ಪಡೆದ ಶಿಕ್ಷಕರು ಮುಂದೆ ತರಬೇತುದಾರರಾಗಿ ಹೊರಹೊಮ್ಮಬೇಕು ಎಂಬುದೇ ತನ್ನ ಆಶಯ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
ಡಾ| ಅಮೃತ ಪ್ರಸಾದ್ ತಮ್ಮ ಸಮಾರೋಪದ ಮಾತಿನಲ್ಲಿ ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಶಿಕ್ಷಕರು ತಮ್ಮ ತಮ್ಮ ವಿಷಯಗಳಲ್ಲಿ ಹಿಡಿತವನ್ನು ಸಾಧಿಸಿಕೊಂಡಿದ್ದಾಗ ಮಾತ್ರ ಮಕ್ಕಳ ಮನಸ್ಸಿನಲ್ಲಿ ತನ್ನ ಛಾಪನ್ನು ಮೂಡಿಸಲು ಸಾಧ್ಯ ಎಂಬ ಕಿವಿ ಮಾತನ್ನು ಹೇಳಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶಿವಪ್ರಕಾಶ್ ಎಂ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಚಂದ್ರಶೇಖರ್ ಮತ್ತು ಕಾರ್ಯಾಗಾರದ ಪ್ರಮುಖ ಸಂಯೋಜಕರಾದಂತಹ ಶ್ರೀಮತಿ ಪರಿಮಳ ಮೂರ್ತಿ ಹಾಗೂ ಶ್ರೀಮತಿ ಅತೀರ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಇವರು ಉಪಸ್ಥಿತರಿದ್ದರು. ತರಬೇತಿ ಪಡೆದ ಶಿಕ್ಷಕರು ಕಾರ್ಯಾಗಾರದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶ್ರೀಮತಿ ಆಶಾ ಕೆ ಶೆಟ್ಟಿ ವರದಿ ಸಲ್ಲಿಸಿದರು.
ಶ್ರೀಮತಿ ಕವಿತಾ ಕೆ ಪ್ರಾರ್ಥಿಸಿ, ಶ್ರೀಮತಿ ಸವಿತಾ ಕೆ ಸ್ವಾಗತಿಸಿ, ಶ್ರೀಮತಿ ರಮ್ಯಶ್ರೀ ಜಿ ವಂದಿಸಿದರು. ಶ್ರೀಮತಿ ದೀಪ್ತಿ ಆರ್ ಭಟ್ ಹಾಗೂ ಕುಮಾರಿ ಆಶಾಲತಾ ಪಿ ಹೆಚ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮವು ಶಾಂತಿಮಂತ್ರದೊಂದಿಗೆ ಸಂಪನ್ನಗೊಂಡಿತು.