ವಿಕಸಿತ ಭಾರತ- 2047 ಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಸಾನ್ವಿಗೆ ದ್ವಿತೀಯ ಬಹುಮಾನ.
ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಗಾಗಿ ಸೇವಾ ಸಂಕಲ್ಪ ಅಭಿಯಾನದ ಪ್ರಯುಕ್ತ ನಡೆದ ವಿಕಸಿತ ಭಾರತ- 2047 ಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದು, 10ನೇ ತರಗತಿಯ ಸಾನ್ವಿ ಎಸ್ (ಸಂತೋಷ್ ಕುಮಾರ್ ಹಾಗೂ ಸೌಮ್ಯಶ್ರೀ ದಂಪತಿಗಳ ಪುತ್ರಿ) ದ್ವಿತೀಯ ಬಹುಮಾನ ಗಳಿಸಿರುತ್ತಾಳೆ. ಅದೇ ರೀತಿ 10ನೇ ತರಗತಿಯ ಪೂರ್ವಿ ಬಿ ಸಿ, ತೃಪ್ತಿ, ನಿನಾದ ಎಂ ಎನ್ ಮತ್ತು ವೈಷ್ಣಿ ಎಂ ರೈ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಮಾಣ ಪತ್ರ ಪಡೆದಿರುತ್ತಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ರಾದ ಶ್ರೀ ಸತೀಶ್ ಕುಮಾರ್ ರೈ ತಿಳಿಸಿರುತ್ತಾರೆ.