ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಮಾಹಿತಿ ಕಾರ್ಯಾಗಾರ
ದಿನಾಂಕ 26-06-2025ನೇ ಗುರುವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾದಕ ವಸ್ತುಗಳ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರವನ್ನು ಶ್ರೀ ಆಂಜನೇಯ ರೆಡ್ಡಿ, ಸಬ್ ಇನ್‌ಸ್ಪೆಕ್ಟರ್ ಪುತ್ತೂರು ನಗರ ಠಾಣೆ, ಇವರು ನಡೆಸಿಕೊಟ್ಟರು. ಮಕ್ಕಳು ಅತೀ ವೇಗವಾಗಿ ಮಾದಕವಸ್ತುಗಳಿಗೆ ಬಲಿಪಶುವಾಗುತ್ತಿದ್ದಾರೆ. ಆದ್ದರಿಂದ ಮಕ್ಕಳು ಆದಷ್ಟು ಮಾದಕ ವಸ್ತುಗಳಿಂದ ದೂರವಿರಬೇಕು. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಸೋಶಲ್ ಮೀಡಿಯದಿಂದ ದೂರವಾಗಿರಬೇಕು. ಮಕ್ಕಳು ಸಮಾಜಕ್ಕೆ ಮಾದರಿಯಾಗಬೇಕು. ಮಕ್ಕಳು ದುಷ್ಚಟಗಳಿಂದ ದೂರವಿರಲು ಏಕಾಗ್ರತೆ ಮತ್ತು ಒಳ್ಳೆಯ ವಿಷಯಗಳನ್ನು ಗ್ರಹಿಸಿ, ಪಾಠದ ಬಗ್ಗೆ ಹೆಚ್ಚು ಗಮನಹರಿಸಿಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಶ್ರೀ ಸ್ಕರಿಯ, ಬಿಟ್ ಪೋಲಿಸ್, ತೆಂಕಿಲ, ಪುತ್ತೂರು, ಎ.ಎಸ್.ಐ ಶ್ರೀ ಕೃಷ್ಣಪ್ಪ, ಶ್ರೀ ವಿರೂಪಾಕ್ಷ, ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಅನುರಾಧಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿರಾದ ಶ್ರೀಮತಿ ಮಾಲಿನಿ ಶ್ರೀಮತಿ ಶಾಂತಿ ಮತ್ತು ಶ್ರೀಮತಿ ಜ್ಯೋತಿ.ಎಸ್ ಸಹಕರಿಸಿದರು.